ಆರು ತಿಂಗಳ ರಾಷ್ಟ್ರಪತಿ ಆಳ್ವಿಕೆಯಲ್ಲಿ(ರಾಜ್ಯಪಾಲರ ಆಳ್ವಿಕೆಯಲ್ಲಿ..??) ಕಾಂಗ್ರೇಸ್ ರಾಜ್ಯಪಾಲರು ಮತ್ತು ಕಾಂಗ್ರೇಸಿಗರು ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗಪಡಿಸಿಕೊಂಡು, ನಿಷ್ಕ್ರಿಯಗೊಳಿಸಿರುವುದಕ್ಕೆ ಯಡ್ಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಡಳಿತ “ಯಂತ್ರವು” ಸಂಪೂರ್ಣ ಕೆಲಸಕ್ಕೆ ಬಾರದಂತಾಗಿದ್ದು ಅದರ ರಿಪೇರಿಗಾಗಿ ತಾವು ಮೆಕ್ಯಾನಿಕ್ ಕೆಲಸ ಮಾಡುವ ಜವಾಬ್ದಾರಿ ಹೊತ್ತಿದ್ದಕ್ಕೆ ತೀವ್ರ ಅಸಂತೋಷವನ್ನು ಹೊರಹಾಕಿದ್ದಾರೆ. ಆಡಳಿತ “ಯಂತ್ರ”ವನ್ನು ಯಜ್ಞ-ಯಾಗಾದಿ “ಮಂತ್ರ”ಗಳಿಂದ ರಿಪೇರಿ ಮಾಡುವುದಾಗಿ ಹೇಳಿದ್ದಾರಂತೆ. ಈ ಯಂತ್ರದ ರಿಪೇರಿಗಾಗಿ ತಾವು “ಜೋತಿಷಿ”ಯೊಬ್ಬರನ್ನ ಸಹಾಯಕರನ್ನಾಗಿ ನೇಮಿಸಿಕೊಳ್ಳುವುದಾಗಿಯೂ ಭರವಸೆಯಿತ್ತಿದ್ದರೆನ್ನಲಾಗಿದೆ.
Categories: Uncategorized
Tagged: ಆಡಳಿತ, ಕಾಂಗ್ರೇಸ್, ಜೋತಿಷಿ, ಯಂತ್ರ, ಯಡಿಯೂರಪ್ಪ, ರಾಜ್ಯಪಾಲರು
ಬಹು ನಿರೀಕ್ಷಿತ ಚುನಾವಣಾ ಫಲಿತಾಂಶವೂ ಬಂದಿದೆ. ಸನ್ಮಾನ್ಯ, ಶ್ರೀಮಾನ್ಯ, ಶ್ರೀ ಅಸಾಮಾನ್ಯ ಯಡ್ಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚುನಾವಣೆಯಲ್ಲಿ ಅವರ ನಗುವೇ ಅವರನ್ನ ಜಯಶಾಲಿಯಾಗಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ತಮ್ಮ ಅನಿರೀಕ್ಷಿತ(ನಿರೀಕ್ಷಿತ..!) ಸೋಲಿಗೆ “ಆತ್ಮಾವಲೋಕನ” ಮಾಡಿಕೊಳ್ಳುತ್ತಿರುವ ಕೈ ತೋರಿಸಿದ ಕಾಂಗ್ರೇಸು, ಹೊರೆ ಹೊತ್ತ ಮಹಿಳೆಯ ಮಡಿಲ ಮಕ್ಕಳು, ಸೈಕಲ್ಲೇರಿ ಕೈ ಕಾಲು ಮುರಿದುಕೊಂಡ ಅಪ್ಪ ಮಕ್ಕಳು, ಆನೆ ಏರಿದ ಮಾವುತರು ಈ ತನಿಖಾ ವರದಿಯಿಂದ ತಮ್ಮ ಸೋಲಿಗೆ ಕಾರಣವನ್ನ ಹುಡುಕಿಕೊಳ್ಳಬಹುದು.

ರಾಜ್ಯದ ಜನತೆಯನ್ನ ಉದ್ಧರಿಸುವುದಿರಲಿ, ನಗಿಸಿಯಾದರೂ ಸಂತೋಷಪಡಿಸಲಾಗದ ರಾಜಕಾರಣಿಗಳನ್ನ ಈ ಚುನಾವಣೆಯಲ್ಲಿ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ..! ಚುನಾವಣೆಗೂ ಮುಂಚೆ, ಯಡ್ಯೂರಪ್ಪನವರು ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತಾ ಹೇಳೀ ಹೇಳೀ ರಾಜ್ಯದ ಜನತೆಯನ್ನ ನಗೆಗಡಲಲ್ಲಿ ತೇಲಿಸುತ್ತಿದ್ದರು. ಇತ್ತೀಚೆಗೆ ಹಾಸ್ಯೋತ್ಸವಗಳು ಕಡಿಮೆಯಾಗಿದ್ದರಿಂದ, ತಾವೇ ಏಕೆ ಆ ಜವಾಬ್ದಾರಿಯನ್ನ ವಹಿಸಿಕೊಳ್ಳಬಾರದೆಂದು ಅಂದುಕೊಂಡು, ಯಡ್ಯೂರಪ್ಪನವರು ರಾಜ್ಯದ ಜನತೆಯನ್ನ ನಗಿಸುವುದರಲ್ಲೇ ಚುನಾವಣೆಯ ಫಲಿತಾಂಶವಿದೆ ಎಂದು ಅರಿತು, ಸಮರ್ಥವಾದ ಚುನಾವಣಾ ತಂತ್ರಗಾರಿಕೆಯಿಂದ ಗದ್ದುಗೆ ಏರಿದ್ದಾರೆ.

ಖ್ಯಾತ ಹಾಸ್ಯನಟರು ಮುಖ್ಯಮಂತ್ರಿಯಾಗುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೇದು. ಯಡ್ಯೂರಪ್ಪನವರು ಮುಂಗೋಪಿ, ಅವಸರಗೇಡಿ ಅಂತೆಲ್ಲಾ ಹೇಳಿ ಅವರ ಇ”ಮೇಜನ್ನ” ಕಸಿದುಕೊಳ್ಳುವುದರಲ್ಲೇ ಅವರು “ಕುರ್ಚಿ” ಹಿಡಿದಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಕೆಲವೊಮ್ಮೆ ಅವರು ದುರ್ವಾಸ ಮುನಿಯಂತೆ ಕೋಪಿಸಿಕೊಳ್ಳುತ್ತಾರೆ ಅಂತಾ ಕೆಲವರು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಚುನಾವಣೆ ಉತ್ತರಿಸಿದೆ. ಅವರು ಕೋಪಿಸಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸುತ್ತಾರೆಯೇ ಹೊರತು ಎಂದೂ ಕೋಪಿಸಿಕೊಂಡ ಉದಾಹರಣೆಗಳಿಲ್ಲ. ವೇದಿಕೆಯ ಮೇಲೆ ಆಕ್ರೋಶಭರಿತರಾಗಿ ಮಾತನಾಡಿದ್ದರೆ, ಅದು ಕೇವಲ “ನಾಟಕದ ಪಾತ್ರ ಬಯಸಿದ್ದಕ್ಕಾಗಿ” ಎಂಬುದನ್ನ ಗಮನಿಸಬೇಕಾಗಿದೆ.

ಚುನಾವಣಾ ಜಾಹೀರಾತುಗಳಲ್ಲಿ ಯಡ್ಯೂರಪ್ಪನವರ ನಗುಮುಖ ತೋರಿಸಿ, ಬಿಜೆಪಿಯೇ ಪರಿಹಾರ ಅಂತಾ ತೋರಿಸಿದ್ದಕ್ಕಾಗಿಯೇ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದು ಎಂಬುದು ಗಮನಿಸಬೇಕಾದ ಸಂಗತಿ. ವಚನ ಭ್ರಷ್ಟತೆಯಿಂದ ಬಿಜೆಪಿಗೆ ಎಷ್ಟು ಅನ್ಯಾಯವಾಯಿತೋ ಗೊತ್ತಿಲ್ಲ. ಆದ್ರೆ, ಪಾಪ ಯಡ್ಯೂರಪ್ಪನವರನ್ನ ನೋಡಲಿಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ಹಾಸ್ಯ ನಟನಿಗೆ ಬಂದೊದಗಿದ ದುಸ್ಥಿತಿ ಅರಿತ ಜನ ಯಡ್ಯೂರಪ್ಪನವರನ್ನ ಸರ್ವಾನು ಸಮ್ಮತವಾಗಿ ಮುಖ್ಯಮಂತ್ರಿಯಾಗಿಸಿದ್ದಾರೆ. ಯಡ್ಯೂರಪ್ಪನವರನ್ನ ಆದ್ರೆ, ಕಾಂಗ್ರೇಸು ಜನ ಪಾಪ “ಸಾಮೂಹಿಕ ನಾಯಕತ್ವ” ಅನುಸರಿಸಲಿಕ್ಕೆ ಹೋಗಿ “ಸಾಮೂಹಿಕ ಆತ್ಮಹತ್ಯೆ” ಮಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆಯಲ್ಲ, ಯಡ್ಯೂರಪ್ಪನವರ “ಶಿಕಾರಿ” ಎಂದು ಸೋತು ಸುಣ್ಣವಾಗಿ ಕಂಗಾಲಾಗಿ ಕುಳಿತಿರುವ “ಪ್ರತಿ”ಪಕ್ಷಗಳು ಆರೋಪ ಮಾಡುತ್ತಿದ್ದಾರೆ.

ಬಿಜೆಪಿಯ ಜಾಹೀರಾತುಗಳಲ್ಲಿ “ಕ್ಲೋಸ್ ಅಪ್” ನಗುವಿನೊಂದಿಗೆ ಬರುತ್ತಿದ್ದ ಯಡ್ಯೂರಪ್ಪನವರನ್ನ ಈಗ ಕ್ಲೋಸ್ ಅಪ್ ನಗುವನ್ನ ಹಂಚಲಿಕ್ಕೆ ತಯ್ಯಾರಿ ನೆಡೆಸಿರುವ ಕ್ಲೋಸ್ ಅಪ್, ಕೋಲ್ಗೇಟ್ ಕಂಪನಿಗಳು ಸಂಪರ್ಕಿಸಲು ತಯ್ಯಾರಿ ನೆಡೆಸಿರುವ ಸಾಧ್ಯತೆಗಳು ಬಹಳಷ್ಟಿವೆ. ಇತ್ತ ಸಂಪುಟಕ್ಕೆ ಸೇರಬೇಕೆಂದು ಬಯಸುವ ಶಾಸಕರ ಕಾಟ, ಅತ್ತ ಕಂಪನಿಗಳ ಕಾಟಗಳಿಂದಾಗಿ ಬೇಸತ್ತ ಯಡ್ಯೂರಪ್ಪನವರು ಕಂಡ ಕಂಡ ಮಠಗಳಿಗೆ ದಕ್ಷಿಣೆ-ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆಯುವಂತೆ ಮಾಡುತ್ತಿದ್ದಾರೆ ಅಷ್ಟೇ. “ಶೋಭಾಯಮಾನ”ರಾಗಿ ಕಂಗೊಳಿಸುತ್ತಿದ್ದ ಯಡ್ಯೂರಪ್ಪನವರ ಪೇಚಿನ ಪರಿಸ್ಥಿತಿ ಕಂಡು ಮತದಾರ ಪ್ರಭುಗಳು ಮತ್ತೊಮ್ಮೆ ಅನುಕಂಪದ ಅಲೆ ಹರಿಸಿದ್ದಾರೆ. ಜಾತ್ಯಾತೀತರು ಹೇಳುವಂತೆ, ಯಡ್ಯೂರಪ್ಪ ಮಠ ಮಾನ್ಯಗಳಿಗೆ ಭೇಟಿ ಕೊಡುವುದು ಕೋಮುವಾದದ ಪ್ರತೀಕವಲ್ಲ.
ಖರ್ಗೆ, ದೇವು ನಗುವುದನ್ನ ಅಭ್ಯಾಸ ಮಾಡಿಕೊಂಡರೆ, ಮುನಿದ ಕರ್ನಾಟಕದ ಮತದಾರ ಮುಂದಿನ ಚುನಾವಣೆಯಲ್ಲಾದರೂ “ಕಮಲೇತರ” ಪಕ್ಷಗಳಿಗೆ ಓಟು ಹಾಕುವ ಯೋಚನೆ ಮಾಡಿಯಾನು. ಕೊನೆಗೆ, ಯಡ್ಯೂರಪ್ಪನವರ ಜಯ, ನಗುವಿನ ಜಯ ಎಂಬುದನ್ನ ಸ್ಪಷ್ಟವಾಗಿ ಹೇಳಬೇಕಿದೆ.
Categories: Uncategorized
Tagged: ನಟ, ಮುಖ್ಯಮಂತ್ರಿ, ಯಡಿಯೂರಪ್ಪ, ಹಾಸ್ಯ, humor, Laughing Yaddi, Yaddyurappa, Yadiyurapa
Welcome to WordPress.com. This is your first post. Edit or delete it and start blogging!
Categories: Uncategorized